ಗುಳಿ ಬಿದ್ದ ಕೆನ್ನೆ
ಮುಖದಲ್ಲಿ ಜೋತ ಚರ್ಮ
ಪ್ರೀತಿ ಮಮತೆಯ ಎದುರು
ನೋಡುತ್ತಿರುವ
ಬಸವಳಿದ ನಯನಗಳು
ಕ್ಷಣ ಹೊತ್ತು ಕಳೆದು
ಕಣ್ಣುಗಳು ಎರಡು ತಂಪಾಗಿ
ಹೆತ್ತವರಿಗೆ ಈ ಧೋರಣೆ
ಸರಿಯೇ?
ಹೊಟ್ಟೆ ಬಟ್ಟೆಗೆ ಕಟ್ಟು
ಹತ್ತಿಸಿದರು ಶಾಲೆಯ
ಮೆಟ್ಟಲು
ಹೊಳೆ ದಾಟಿದ ಮೇಲೆ
ಅಂಬಿಗನ ಮರೆತಂತೆ
ಹೆತ್ತ ತಂದೆ ತಾಯಿಯರಿಗೆ
ಮಾಡುವುದು ಸರಿಯೇ?
ನಿಮ್ಮ ಎಳೆ ವಯಸಲಿ
ತೋರಿದ ಮಮತೆ ಪ್ರೀತಿಗೆ
ಬೆಲೆ ಕಟ್ಟಿಯಾದರು
ಇಳಿ ವಯಸಲಿ ಪ್ರೀತಿಯ
ತೋರಬಾರದೇ?
ಹಿತ ನುಡಿಯನ್ನ ಕವನದ ಮೂಲಕ ಚೆನ್ನಾಗಿ ಬರೆದಿದ್ದೀರಿ. ವಂದನೆಗಳು.
ReplyDeleteFor you:
ReplyDeletehttp://ranjana-craft-blog.blogspot.in/2012/06/blog-awards.html